Mr Nandesha is a multifaceted individual driven by a passion for
literature, a love for children, and a commitment to making a positive impact
in the lives of others. Read more about him in his own inimitable verbiage in
Kannada. There is the translated version in English also for your reading
pleasure.
ನಾನು ಸಾಹಿತ್ಯಾಸಕ್ತ,
ಸದಾ ಧನಾತ್ಮಕ ಚಿಂತಕ, ಸರ್ವಹಿತದಲ್ಲೆ ತನ್ನ ಹಿತವೂ ಅಡಗಿದೆ ಎಂದು ನಂಬಿರುವವ. ವಿದ್ಯಾರ್ಥಿಯೇ ದೇವರು
ಬೋಧನೆಯೇ ಉಪಾಸನೆ ಎಂಬುದನ್ನು ಬಲವಾಗಿ ಒಪ್ಪಿಕೊಂಡಿರುವವ. ಜಾನಪದ ಕಲಾವಿದ, ನಾಟಕದಲ್ಲಿ ಸಂಭಾಷಣೆ
ಮತ್ತು ಅಭಿನಯದಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಉತ್ಸುಕನಾಗಿರುವ ನಾನು ಕ್ರಿಯಾಶೀಲ, ಕನ್ನಡಪ್ರೇಮಿ, ವಿಭಿನ್ನ ಚಿಂತಕ ಮತ್ತು
ಆಧ್ಯಾತ್ಮಿಕತೆಯಲ್ಲಿ ಆಸಕ್ತಿಯುಳ್ಳ ಸರಳ ವ್ಯಕ್ತಿ. ಸದಾ ಅಧ್ಯಯನಶೀಲ.
ಹಾಸ್ಯಪ್ರಜ್ಞೆಯುಳ್ಳವ, ಎಲ್ಲರ ಜೊತೆಯಲ್ಲೂ ಸುಲಭವಾಗಿ ಬೆರೆಯುವ ವ್ಯಕ್ತಿ
ಎಂದು ವಿವರಿಸುವ ನನ್ನ ಸ್ನೇಹಿತರು ನನ್ನನ್ನು ಅಪರೂಪದ
ಬಹುಮುಖ ಪ್ರತಿಭೆ, ಸ್ನೇಹಮಯಿ, ಕಷ್ಟದಲ್ಲಿ ಇರುವವರಿಗೆ ಬೇಗ ಸ್ಪಂಧಿಸುವ ಗುಣದವಂತ, ಅಂತಃಕರಣ
ಶುದ್ಧಿಯುಳ್ಳವ, ಯಾರ ಮೇಲೂ ದ್ವೇಷವನ್ನು ಸಾಧಿಸದ ಅಜಾತ ಶತ್ರು ಎಂದು ಹೇಳುತ್ತಾರೆ ಮತ್ತು ಉತ್ತಮ ಕಾರ್ಯಕ್ರಮ ನಿರೂಪಕ ಎಂದು ಮೆಚ್ಚುತಾರೆ.
ನಿಸರ್ಗದ ಮಡಿಲೋ, ಹಸಿರು ತೋಟವೂ ಅಂತೂ ಯಾವುದೇ ಪ್ರಶಾಂತವಾದ
ಸ್ಥಳ ನನಗೆ ಇಷ್ಟವಾಗುತ್ತದೆ. ಮನಸ್ಸನ್ನು ತಿಳಿಗೊಳಿಸುವ ಜಾಗ ಯಾವುದಾದರೂ ನನ್ನ ಮನಸೆಳೆಯುತ್ತದೆ.
ಸಹ್ಯಾದ್ರಿ ಶ್ರೇಣಿ, ಕವಿಶೈಲ, ಐತಿಹಾಸಿಕ ದೇಗುಲಗಳು ಇವಕ್ಕೆ ಉದಾಹರಣೆ.
ಅಪರಿಚಿತರಿಗೆ ಗೊತ್ತಿಲ್ಲದ ವಿಷಯವೇನೆಂದರೆ ನಾನು ಅಂತರ್ಮುಖಿ. ಎಲ್ಲರ ಮಧ್ಯೆಯಿದ್ದಾಗಲೂ
ಧ್ಯಾನಾಸಕ್ತನಾಗಬಲ್ಲೆ. ಇದರ ಜೊತೆ, ಕವನ ರಚಿಸುವುದು, ಶ್ರೀ ಮಠದಲ್ಲಿ ಸೇವೆ ಮಾಡುವುದು. ಮಕ್ಕಳ ಜೊತೆ
ಆಟವಾಡುವುದು ನನಗೆ ತುಂಬಾ ಪ್ರಿಯ.
ನನ್ನ ಜೀವನದಲ್ಲಿ ಅತ್ಯುತ್ಕೃಷ್ಟ ಪರಿಣಾಮವನ್ನು ಬೀರಿರುವ ವ್ಯಕ್ತಿಗಳು ಶ್ರೀ ಶ್ರೀ ಗೌರಿಶಂಕರ ಸ್ವಾಮಿ, ಶ್ರೀ ಸಿದ್ಧಗಂಗಾ ಮಠ ಮತ್ತ
ಜಗಜ್ಯೋತಿ ಬಸವಣ್ಣನವರು.
ನಾನು ಮಿರ್ಜಿ ಅಣ್ಣರಾಯನ ನಾವೆಲ್ "ನಿಸರ್ಗ" ಕಥೆಯನ್ನು 15 ಸಲ ಓದಿದ್ದೇನೆ!
ನನ್ನ ನೆಚ್ಚಿನ
ವಿಚಾರಧಾರೆ: ಬಾಳ್ವೆಯೇ ಬೆಳಕು; ತಾಳ್ಮೆಯೇ ಬದುಕು
ನಾ ಮೆಚ್ಚಿದ ಚಲನಚಿತ್ರಗಳು:
1. ಭುಜಂಗಯ್ಯನ ದಶಾವತಾರ
2. ಚೋಮನ ದುಡಿ
3. ನಾಗರ ಹಾವು
ಮಕ್ಕಳ ಮುಗ್ಧ
ಮನಸ್ಸು ಮೊದಲು ನನ್ನ ಮನಸೆಳೆಯುತ್ತದೆ.
ಮಕ್ಕಳ ಮಟ್ಟಕ್ಕೆ ಇಳಿದು ಬೋಧಿಸುವುದು.
ಮಕ್ಕಳಿಗೆ ಅರ್ಥವಾಗುವ
ಭಾಷೆ ಬಳಸುವುದು. ಸರಳ ಭಾಷೆ ಮತ್ತು ಜ್ವಲಂತ ಉದಾಹರಣೆ ನೀಡುವುದು. ನನ್ನ ವೃತ್ತಿ ಮರ್ಮ.
ವರ್ಷಕ್ಕೊಮ್ಮೆ ವಿದ್ಯಾಂಜಲಿಯ ಎಲ್ಲಾ ಸಹೋದ್ಯೋಗಿ ಮಿತ್ರರ ಜೊತೆಯಲ್ಲಿ ಒಂದು
ದಿನದ ಪ್ರವಾಸ ಹೋಗುವುದು ಸದಾ ನನ್ನ ನೆನೆಪಿನಲ್ಲಿ ಉಳಿಯುವ ಸಂಗತಿ.
ನನ್ನ ಮೊದಲ ಪುಸ್ತಕ “ಹೆಜ್ಜೆಗಳು” ಕವನ ಸಂಕಲನ ಬಿಡುಗಡೆಯಾದ ಸುಕ್ಷಣ ಅತ್ಯಂತ ಸಂತೋಷಕರ
ಕ್ಷಣ.
ನಾನು ಕಂಡುಕೊಂಡ
ಜೀವನದ ಬಹುದೊಡ್ಡ ಪಾಠ: ಜೀವನದ ಪ್ರತೀಕ್ಷಣವನ್ನು
ಮನಸ್ಪೂರ್ತಿಯಾಗಿ ಸ್ವೀಕರಿಸಿ ಆಸ್ವಾಧಿಸಬೇಕು.
ನಗುವೊಂದು ರಸಪಾಕ
ಅಳುವೊಂದು ರಸಪಾಕ
ನಗುವಾತ್ಮ ಪರಿಮಳವ
ಪಸರಿಸುವ ಕುಸುಮ
ದುಗುಡವಾತ್ಮವ
ಕಡೆದು ಸತ್ತ್ವವೆತ್ತುವ ಮಂತು
ಬಗೆದೆರಡನುಂ ಭಜಿಸು
- ಮಂಕುತಿಮ್ಮ
ಕೊನೆಯಲ್ಲಿ ನಾನು ಹೇಳಬಯಸುವ ಸಂದೇಶ:
ಎತ್ತರೆತ್ತರಕೆ
ಸಾಗು
ಎಚ್ಚರೆಚ್ಚರದಿ
ಸಾಗು
ಇರಲಿ ಕರ್ತವ್ಯ
ನಿಷ್ಟೆ
ನಂದಿ ಕೇಳುವುದು
ಇಷ್ಟೆ.
ENGLISH Version:
I am
a literary enthusiast, an eternal optimist, and someone who believes in the
welfare of others as the key to personal fulfilment. For me, students are like
Gods, and teaching is a form of worship. Engaging in dialogues, performing in
dramas, and being a folk artist are passions that bring me joy. I am an
industrious yet simple soul with a deep love for Kannada, a penchant for
thinking out-of-the-box, and a keen interest in spirituality. My studious
nature is a constant in my life.
My friends describe me as someone with a great sense of humour, easy to
get along with, and respectful towards
everyone. They consider me as a multi-talented person, always ready to help
those in need. They believe that my pure-heartedness keeps me free from grudges
and enemies. Additionally, they commend me for my skills as an event anchor.
Peaceful places like the Sahyadri Mountain Range, Kavishaila, and
historical temples captivate me, drawing me towards their serene beauty. In my
free time, I enjoy composing poetry, serving in Sri Math, and playing with
children. One lesser-known fact about me is that I am naturally inclined
towards introspection and can enter a meditative state even amidst a bustling
crowd.
Two individuals who have had a significant impact on my life are Sri Sri
Gaurishankara Swami from Sri Siddhganga Mutt and Jagajjoti Basavanna. Their
teachings and guidance have shaped my journey significantly.
One novel that has deeply resonated with me is Mirji Annaraya's
"Nisarga," which I have read at least 15 times. It holds a special
place in my heart. Life, for me, is synonymous with light, and I believe that
patience is the essence of truly living.
When it comes to movies, "Bhujangayyana Dashavataara,"
"Chomana Dudi," and "Naagara Haavu" are among my
favourites. Their storytelling and artistic brilliance captivate me.
As a teacher, I am drawn to the innocent minds of children. I employ
teaching approaches that include using simple language, providing vivid
examples, and communicating at their level of understanding.
One cherished memory at Vidyanjali is our annual day trip, which I
eagerly look forward to. It is a time when colleagues and friends come
together, creating unforgettable moments.
The publication of my poetry anthology "HejjegaLU" brought
immense joy to my life. It is a milestone that I will always treasure.
Embracing every moment of life and enjoying it wholeheartedly is my
philosophy.
Smiles are one flavour
Cries are another flavour
Laughter is a flower that
spreads the fragrance of the soul,
While sadness allows the
essence of the soul to be realised
We should pray and ask God
for both experiences Mankuthimma
I would like to end with a thought:
To soar higher, one must
dare
Stay vigilant and take
care
Loyalty to tasks
Is all that Nandi asks